ಪಬ್ಲಿಕ್ 5ಎಕ್ಸ್ಕ್ಲೂಸಿವ್ | ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ವಿರೋಧ ಪಕ್ಷದ ನಾಯಕ ಮನಿಯಾರ್ ಇಲಿಯಾಸ್ ಮೊದಲ ಪ್ರತಿಕ್ರಿಯೆ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮನಿಯಾರ್ ಇಲಿಯಾಸ್ ಅವರು ಪಬ್ಲಿಕ್ ಫೈರ್ ಜೊತೆಗಿನ ತಮ್ಮ ಮೊದಲ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದರು. “ಹುಬ್ಬಳ್ಳಿ-ಧಾರವಾಡದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳಲ್ಲಿ ಹಲವನ್ನು ಈಗಾಗಲೇ ನನ್ನ ಗಮನಕ್ಕೆ ತೆಗೆದುಕೊಂಡಿದ್ದೇನೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಹಾಗೂ ಜನಪರ ವಿಷಯಗಳಲ್ಲಿ ಆಡಳಿತ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಗತ್ಯವಿರುವ ಎಲ್ಲ ಕಾರ್ಯಗಳಿಗೆ ಒತ್ತು ನೀಡುತ್ತೇನೆ,” ಎಂದು ಹೇಳಿದರು. “ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಪಕ್ಷದ ನಾಯಕರು, ಸದಸ್ಯರು ಹಾಗೂ ಜಿಲ್ಲೆಯ ಜನತೆಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ, ಯಾವುದೇ ಮುಜುಗರ ಉಂಟಾಗದ ರೀತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದೇ ನನ್ನ ಮುಖ್ಯ ಧ್ಯೇಯ. ಜನರಿಗೆ ಉತ್ತಮ ಆಡಳಿತ ದೊರೆಯುವಂತೆ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ,” ಎಂದು ಮನಿಯಾರ್ ಇಲಿಯಾಸ್ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದರು

