ಪ್ರೀತಿಸಿದ್ರು, ಸಪ್ತಪದಿ ತುಳಿದ್ರು, ಆದ್ರೆ ಅಹಂಗೆ ಬಲಿಯಾದರು..!
ಮನುಷ್ಯನಿಗೆ ಇಗೋ ಅನ್ನೋದು ಬಂದುಬಿಟ್ರೆ ಎಂಥಾ ಪ್ರೀತಿ ಇದ್ರೂ ಉಳಿಸಿಕೊಳ್ಳೋದು ಕಷ್ಟ. ಪ್ರೀತಿ, ಪ್ರೇಮ ಎಲ್ಲವನ್ನೂ ಇಗೋ ಅನ್ನೋ ರಾಕ್ಷಸ ನುಂಗಿಬಿಡುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
#ದಕ್ಷಿಣ ಕನ್ನಡ ಜಿಲ್ಲೆ #ಬೆಳ್ತಂಗಡಿಯ ಎಳನೀರು ಗ್ರಾಮದ ನಿವಾಸಿ ಸುಮಂತ್ ಜೈನ್, #ಹುಬ್ಬಳ್ಳಿ ಮೂಲದ ಪದ್ಮಾವತಿ ಇಬ್ಬರು ಪರಸ್ಪರ ಪ್ರೀತಿಸಿ 4 ವರ್ಷಗಳ ಹಿಂದೆ ಮದುವೆಯಾಗಿದ್ರು. ಸಿವಿಲ್ ಇಂಜಿನಿಯರ್ ಆಗಿ ಸುಮಂತ್ ಕೆಲಸ ಮಾಡ್ತಿದ್ರೆ, #ವೈಟ್-ಫೀಲ್ಡ್ ನ ಪ್ರತಿಷ್ಠಿತ ಕಂಪನಿಯಲ್ಲಿ ಪದ್ಮಾವತಿ ಇಂಜಿನಿಯರ್ ಆಗಿದ್ದಳು. ಇಬ್ಬರಿಗೂ ಕೈತುಂಬಾ ಸಂಬಳ ಇತ್ತು.
ಬದುಕು ಸುಂದರ ಅನ್ನಿಸಿತ್ತು.
ನಾಲ್ಕು ತಿಂಗಳ ಹಿಂದೆ #ಲಗ್ಗೆರೆ ಬಳಿಯ #ರಾಜೇಶ್ವರಿ_ನಗರಕ್ಕೆ ದಂಪತಿ ಶಿಫ್ಟ್ ಆಗಿದ್ದರು. ಹೊಸ ಮನೆಗೆ ಬಂದ್ರೂ ಇಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಬೆಟ್ಟದಷ್ಟಿತ್ತು. ನಿತ್ಯ ಜಗಳ, ಮುನಿಸು, ಕೋಪ ಪರಸ್ಪರ ಹೇಸಿಗೆ ಹುಟ್ಟಿಸಿತ್ತು. ರಾತ್ರಿ ಇಬ್ಬರ ಮಧ್ಯೆ ಜಗಳ ತಾರಕಕ್ಕೇರಿದೆ. ದುಡುಕಿದ ಸುಮಂತ್ ಕ್ರೂರಿಯಾಗಿಬಿಟ್ಟಿದ್ದಾನೆ. ಕೈ ಹಿಡಿದ ಹೆಂಡತಿಯ ಪ್ರಾಣವನ್ನ ತನ್ನ ಕೈಯ್ಯಾರೆ ತೆಗೆದುಬಿಟ್ಟಿದ್ದಾನೆ.
ಬಳಿಕ ತನ್ನ ತಾಯಿಗೆ, ಈ ಮನೆ ನನ್ನದು ನನ್ನದು ಎಂದು ಹೇಳಿಕೊಂಡು ಹೆಂಡತಿ ಜೊತೆ ಜಗಳವಾಗುತ್ತಿದೆ. ಈ ವಿಷಯವಾಗಿ ನಾನು ಸಾ*ಯುತ್ತಿದ್ದೇನೆ. ನನ್ನ ಪಿಎಫ್ ಹಣ ಹಾಗೂ ಮನೆಯಲ್ಲಿ ಇರುವ ವಸ್ತುಗಳನ್ನ ನೀವೆ ತೆಗೆದುಕೊಂಡು ಹೋಗಿ ಎಂದು ವಾಯ್ಸ್ ಮೆಸೇಜ್ ಕಳಿಸಿ ಸಾವಿಗೆ ಶರಣಾಗಿಬಿಟ್ಟಿದ್ದಾನೆ.
ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸ್ತಿದ್ದಾರೆ.
ಸಮಸ್ಯೆ, ಹೊಂದಾಣಿಕೆ ಕೊರತೆ ಇದ್ದರೆ ಕೂತು ಮಾತಾಡಬಹುದಿತ್ತು.. ಛೇ..

