ಬರ ಘೋಷಣೆ ಮಾಡಿ ಇಲ್ಲಾ ರೈತರಿಗೆ ವಿಷ ಕೊಡಿ
ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ ಕಳೆದ ತಿಂಗಳ ಬರ ಘೋಷಿಸಲು ರಾಜ್ಯದ ಮುಖ್ಯಮಂತ್ರಿ ಆದೇಶದಂತೆ ಆಯೇ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿದರು ಕೂಡ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಬರ ಘೋಷಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ರಾಜ್ಯದ ಅಧಿವೇಶನದಲ್ಲಿ ಒಬ್ಬ ಸಚಿವ ನಾಗೇಂದ್ರ ರಾಜೀನಾಮೆ ಕುರಿತು ಅಧಿವೇಶನದಲ್ಲಿ ಚರ್ಚೆಯಾಗಿದೆ ರಾಜ್ಯದ ರೈತರ ಬರದ ಸ್ಥಿತಿಗತಿ ಕುರಿತು ಅಧಿವೇಶನದಲ್ಲಿ ಬರ ಘೋಷಿಸುವುದಕ್ಕೆ ಯಾವುದು ಚರ್ಚೆ ಆಗಲಿಲ್ಲ ಶೀಘ್ರದಲ್ಲಿ ವಿಧಾನಸೌಧಲ್ಲಿ ಬರ ಘೋಷಿಸಿ ರಾಜ್ಯದ ರೈತರಿಗೆ ಬರ ಪರಿಹಾರ ನೀಡಬೇಕು ಎರಡು ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಬೇಕು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ತುಂಬಿರುವ ರೈತರ ಖಾತೆಗೆ ಬೆಳೆವಿಮೆ ಜಮಾವಣೆ ಮಾಡಿಸಬೇಕು ಬರದ ಮಧ್ಯದಲ್ಲಿ ಹಣ ಇಲ್ಲದೆ ಬೆಳೆವಿಮೆ ತುಂಬದೇ ಇರುವಂತಹ ರೈತರಿಗೂ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತ ಭಾರತರತ್ನ ರೈತ ಸಂಘದ ಕುಂದಗೋಳ ತಾಲೂಕಿನ ಮಾಜಿ ಅಧ್ಯಕ್ಷ ಬಸವರಾಜ ಯೋಗಪ್ಪನವರು ಆಗ್ರಹಿಸಿದರು
ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ 6.64 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಿದ ಕೃಷಿ ಬೆಳೆಗಳು ಓಣಗಿ ನಾಶವಾಗಿವೆ. ಬೆಳೆ ಕಳೆದುಕೊಂಡ ರೈತರಿಗೆ
ಆತಂಕ ಎದುರಾಗಿದೆ. ಹೆಸರು, ತೊಗರಿ,ಶೀಂಗಾ ಮೆಕ್ಕೆಜೋಳ ಈರುಳ್ಳಿ ಅಲಸಂದಿ ಉದ್ದು ಹತ್ತಿ, ಬೆಳೆಗಳಿಗೆ ಹೆಚ್ಚಿನ ರಿತಿಯಲ್ಲಿ ಹಾನಿಯಾಗಿದೆ. ಇದರ ನಡುವೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು. ಜಿಲ್ಲಾಧಿಕಾರಿಗಳು ಜಂಟಿಯಾಗಿ ಬರ ಘೋಷಿಸುವುದಕ್ಕೆ ಕಳೆದ ತಿಂಗಳ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ತುಂಬಿರೋ ಅಥವಾ ಇಲ್ವೋ ಎಂದು ಸಚಿವರು ಅಧಿಕಾರಿಗಳು ರೈತರನ್ನು ಪ್ರಶ್ನಿಸಿದರು. ಹೌದು ರೈತರು ಬೆಳೆವಿಮೆ ತುಂಬಿದ್ದು ಖಾಸಗಿ ಕಂಪನಿಯವರಿಗೆ ಸರ್ಕಾರದ್ದಲ್ಲ ಬೆಳೆವಿಮೆ ಹಣವನ್ನು ಖಾಸಗಿ ಕಂಪನಿಯವರಿಂದ ಸರ್ಕಾರದ ಸಚಿವರು ಹೇಳಿ ಹಾಕಸಬೇಕು ಬರ ಘೋಷಿಸುವುದು ಏನಿದೆ ಸರ್ಕಾರದ್ದು ಬೆಳೆವಿಮೆ ಏನಿದೆ ಖಾಸಗಿ ಕಂಪನಿದು.ಈಗ ಸರ್ಕಾರ
ಬರ ಘೋಷಿಸಿ ರೈತರಿಗೆ ಬರ ಪರಿಹಾರ ನೀಡಬೇಕು.ಬೆಳೆವಿಮೆ ಹಣವನ್ನು ಖಾಸಗಿ ಕಂಬನಿ ರೈತರ ಖಾತೆಗೆ ಜಮವಣೆ ಮಾಡಬೇಕು.
ಬೆಳೆವಿಮೆ ಹಣ ಖಾಸಗಿ ಕಂಪನಿಗೆ ಸಂಬಂಧವಿರುತ್ತದೆ ಬರ ಪರಿಹಾರದ ಹಣ ಸರಕಾರಕ್ಕೆ ಸಂಬಂಧವಿರುತ್ತದೆ ಸರಕಾರ ಮಾಡುವ ಕೆಲಸ ಸರ್ಕಾರ ಮಾಡಬೇಕು ಖಾಸಗಿ ಕಂಪನಿ ಮಾಡುವ ಕೆಲಸ ಖಾಸಗಿ ಕಂಪನಿ ಮಾಡಬೇಕು. ಆದರೆ ಇದರಲ್ಲಿ ಸರ್ಕಾರ ಕಂಪನಿ ಯಾವುದೇ ಇರಲಿ ಜಂಟಿಯಾಗಿ ಕೆಲಸ ಮಾಡುತ್ತದೆ ಈ ಕುರಿತು ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ರಾಜ್ಯದ ರೈತರಿಗೆ ಅನುಕೂಲತೆ ಮಾಡಿಕೊಡಬೇಕೆಂದು ರೈತ ಭಾರತರತ್ನ ರೈತ ಸಂಘದ ಕುಂದಗೋಳ ತಾಲೂಕಿನ ಮಾಜಿ ಅಧ್ಯಕ್ಷ ಬಸವರಾಜ ಯೋಗಪ್ಪನವರು ಆಗ್ರಹಿಸಿದರು
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶುಭಾಸ ಉಮಚಗಿ. ಹನುಮಂತಪ್ಪ ಗುಡಿಮನಿ. ಶಂಕ್ರಪ್ಪ ಉಮಚಗಿ. ಪುಟ್ಟು ಗುಡಿಮನಿ. ಸೇರಿದಂತೆ ಇನ್ನಿತರರು ಆಗ್ರಹಿಸಿದರು

