ಹುಬ್ಬಳ್ಳಿ: ರಕ್ಷಾ ಬಂಧನದ ಅಂಗವಾಗಿ ಹುಬ್ಬಳ್ಳಿಯಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ಶಿರಹಟ್ಟಿ ಹಾಗೂ ಐನಾಪುರದ ಶ್ರೀ ಹೊಂಬುಜ ಪದ್ಮಾವತಿ ಪಾದಯಾತ್ರೆ ತಂಡದ ಸುಮಾರು 120 ಮಂದಿ ಬಂಧುಗಳು ಹುಬ್ಬಳ್ಳಿಗೆ ಆಗಮಿಸಿದ್ದರು. ಇವರಿಗಾಗಿ ಹುಬ್ಬಳ್ಳಿಯ ಶಾಂತಿನಾಥ ಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದಿಗಂಬರ ಜೈನ ಮಹಿಳಾ ಸಮಾಜ, ಹುಬ್ಬಳ್ಳಿ ವತಿಯಿಂದ ವಿಶೇಷವಾಗಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಮಹಾನಗರದ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ್ ಬಿಜಾವಾಡ್ ಹಾಗೂ ಬಿಜೆಪಿ ಮುಖಂಡರಾದ ಶಶಿಕಾಂತ್ ಬಿಜಾವಾಡ್ ಅವರಿಗೆ ದಿಗಂಬರ ಜೈನ ಮಹಿಳಾ ಸಮಾಜದ ಸದಸ್ಯೆಯರು ರಾಖಿ ಕಟ್ಟಿ ಗೌರವಿಸಿದರು. ಇದೇ ವೇಳೆ ಹೊಂಬುಜ ಪದ್ಮಾವತಿ ಕ್ಷೇತ್ರದತ್ತ ಪಾದಯಾತ್ರೆ ಮೂಲಕ ತೆರಳುತ್ತಿರುವ ಸಹೋದರರಿಗೆ ಮಹಾಪೌರರು ಶುಭ ಹಾರೈಸಿದರು. ಹುಬ್ಬಳ್ಳಿಯ ಮಹಾವೀರ ಗಲ್ಲಿಯಲ್ಲಿರುವ ಭಗವಾನ್ 1008 ಶ್ರೀ ಶಾಂತಿನಾಥ ಬಸದಿಗೆ ತೆರಳಿದ ಮಹಾಪೌರರು ಪೂಜೆ ಸಲ್ಲಿಸಿ, ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ರಕ್ಷಾ ಬಂಧನ ಕಟ್ಟಿದರು. ಯಾತ್ರೆ ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ಸಾಗಲಿ ಹಾಗೂ ಎಲ್ಲರೂ ಸುರಕ್ಷಿತವಾಗಿ ಕ್ಷೇತ್ರ ತಲುಪಲಿ ಎಂದು ಹಾರೈಸಿದರು. ಕಾರ್ಯಕ್ರಮಕ್ಕೆ ದಿಗಂಬರ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ತ್ರಿಶಲಾ ಮಾಲಗತ್ತಿ ಅವರು ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮಾಜದ ಪದಾಧಿಕಾರಿಗಳಾದ ಅನುಪಮಾ ರೋಖಡೆ, ಚಂದನ ಜವಳಿ, ಸ್ಮಿತಾ ಬಾಗಿ, ವೀಣಾ ಟಿಕಣ್ಣವರ್, ಮಾನಸಾ ರೋಖಡೆ, ಪ್ರಭಾ ಪಂಡಿತ್, ಹೇಮಾ ಇಜಾರಿ, ಬಸಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯುವ ಫೋರಂನ ವಿನಾಯಕ ಶೆಟ್ಟಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಂಧುಗಳಿಗೆ ದಿಗಂಬರ ಜೈನ ಮಹಿಳಾ ಸಮಾಜದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪಾದಯಾತ್ರೆಯ ಮುಂದಿನ ವ್ಯವಸ್ಥೆಗಳಿಗೆ ಸಹಕಾರವಾಗುವಂತೆ ಶ್ರೀ ಹೊಂಬುಜ ಪದ್ಮಾವತಿ ಪಾದಯಾತ್ರೆ ತಂಡಕ್ಕೆ ದೇಣಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಾವೀರ ಗೊಂಗಡಿ, ಸುಕಾಂತ್ ಇಜಾರಿ, ರಾಜೇಂದ್ರ ಬೀಳಿಗಿ, ಸುಪಾರ್ಶ್ವ ಪಂಡಿತ್, ವಿಜಿತ್ ಇಜಾರಿ, ಸುಪ್ರೀತ್ ದಿನಕರ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. 16 ವರ್ಷಗಳ ಪಾದಯಾತ್ರೆಯ ಪರಂಪರೆ ಇನ್ನು ಶ್ರೀ ಹೊಂಬುಜ ಪದ್ಮಾವತಿ ಪಾದಯಾತ್ರೆ ತಂಡ ಕಳೆದ ಸುಮಾರು 16 ವರ್ಷಗಳಿಂದ ಈ ಧಾರ್ಮಿಕ ಪಾದಯಾತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಆರಂಭದಲ್ಲಿ ಕೇವಲ 11 ಮಂದಿಯಿಂದ ಪ್ರಾರಂಭವಾದ ತಂಡ, ಇಂದು ಸುಮಾರು 180 ಮಂದಿಯವರೆಗೆ ಬೆಳೆದಿದೆ. ಪ್ರತಿ ವರ್ಷ ಶ್ರಾವಣ ಮಾಸದ ನಾಲ್ಕನೇ ಶುಕ್ರವಾರದಂದು ತಂಡವು ಶ್ರೀ ಕ್ಷೇತ್ರ ಹೊಂಬುಜ ತಲುಪಿ ಮಾತೆ ಪದ್ಮಾವತಿ ದೇವಿಯ ದರ್ಶನ ಪಡೆಯುತ್ತದೆ. ವಿಶೇಷವೆಂದರೆ, ಹೊಂಬುಜ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಈ ತಂಡದ ವತಿಯಿಂದ ಅನ್ನದಾಸೋಹ ಕೂಡ ನಡೆಯುತ್ತದೆ ಎಂದು ತಂಡದ ಸಂತೋಷ್ ಐನಾಪುರ ತಿಳಿಸಿದ್ದಾರೆ. ಭಕ್ತಿ, ಬಾಂಧವ್ಯ ಹಾಗೂ ಸೇವೆಯ ಸಂದೇಶವನ್ನು ಸಾರುತ್ತಾ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಪಾದಯಾತ್ರೆ ತಂಡಕ್ಕೆ ಹುಬ್ಬಳ್ಳಿಯಲ್ಲಿ ರಕ್ಷಾ ಬಂಧನದ ಮೂಲಕ ಶುಭ ಹಾರೈಸಲಾಯಿತು. ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ಹಬ್ಬ ಮಾತ್ರವಲ್ಲ, ಪ್ರೀತಿ, ಬಾಂಧವ್ಯ, ಸಹೋದರತ್ವ ಮತ್ತು ಪರಸ್ಪರ ಗೌರವದ ಸಂಕೇತ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು. #rakshabandhan #hombujapadmavati #jainreligion #dharwaddistrictjains #ijyf #digambar #shwetambar #celebrations #shantinathbhavan #hublimayor #ಬಸದಿ #ಪಾದಯಾತ್ರೆ #hublidharwad #breakingnews #viralhubli #latestnews #kannada #trendingkannada #newsupdate #indianews #viralnews #kannadaupdates #congressgovernment #bjp #hublidharwad #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral Public 5 News

