ಉಪಹಾರದಲ್ಲಿ ಸತ್ತು ಬಿದ್ದಿದ್ದ ಹಲ್ಲಿಯ ಭಾಗಗಳು ಪತ್ತೆ
ಹಾವೇರಿಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಬಾಣಂತಿಯರು ಹಾಗೂ ರೋಗಿಗಳಿಗೆ ನೀಡಿದ್ದ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಳಗಿನ ಉಪಹಾರಕ್ಕಾಗಿ ತಯಾರಿಸಲಾಗಿದ್ದ ಕೇಸರಿ ಬಾತ್ನಲ್ಲಿ ಸತ್ತು ತುಂಡು ತುಂಡಾಗಿದ್ದ ಹಲ್ಲಿ ಸಿಕ್ಕಿದ್ದು, ಆಹಾರ ಸೇವಿಸುವ ವೇಳೆ ಇದನ್ನು ಕಂಡ ರೋಗಿಗಳು ಹಾಗೂ ಬಾಣಂತಿಯರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.
ಇದೇ ಕಲುಷಿತ ಕೇಸರಿ ಬಾತ್ ಅನ್ನು ಬಾಣಂತಿಯರು ಮತ್ತು ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳಿಗೆ ವಿತರಿಸಲಾಗಿತ್ತು ಎಂಬ ವಿಷಯ ತಿಳಿಯುತ್ತಿದ್ದಂತೆ ರೋಗಿಗಳ ಸಂಬಂಧಿಕರು ಹಾಗೂ ಸಾರ್ವಜನಿಕರು ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಸಾರ್ವಜನಿಕರು ಆಸ್ಪತ್ರೆ ಕ್ಯಾಂಟೀನ್ಗೆ ನುಗ್ಗಿ ಪರಿಶೀಲನೆ ನಡೆಸಿದಾಗ, ಆಹಾರ ನೀಡುವ ಪ್ಲೇಟ್ಗಳ ಮೇಲೆಯೇ ಜಿರಳೆಗಳು ಹರಿದಾಡುತ್ತಿರುವುದು ಕಂಡುಬಂದಿದ್ದು, ಕ್ಯಾಂಟೀನ್ನ ದುಸ್ಥಿತಿ ಬಯಲಾಗಿದೆ.
ಬಾಣಂತಿಯರ ಹಾಗೂ ನವಜಾತ ಶಿಶುಗಳ ಆರೋಗ್ಯದ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವ ಕ್ಯಾಂಟೀನ್ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
#haveri #haverihospital #canteenhorror #deadlizardinfood #haverinews #healthdept #foodsafety #hospitalnegligence #karnatakanews #haveridistricthospital #karnatakanews #kannadanews #breakingnews #hospitalnews #foodsafety #karnatakabreakingnews #ViralNewsHaveri

