ಗ್ರಾಮಸ್ಥರ ದಾಹ ನೀಗಿಸಬೇಕಿದ್ದ ನೀರು ಹಳ್ಳದ ಪಾಲು! | Byadagi | Haveri |
ಬ್ಯಾಡಗಿ : ದಿಡಗೂರ–ಬಿದರಗಡ್ಡಿ ಗ್ರಾಮಗಳ ಕುಡಿಯುವ ನೀರಿನ ಪೈಪ್ಲೈನ್ಗೆ ಹಾನಿ.!
ಬ್ಯಾಡಗಿ : ದೂರದ ಊರಿನಿಂದ ಸುಮಾರು 40 ಕಿ.ಮೀ. ಪೈಪ್ಲೈನ್ ಮೂಲಕ ತರಲಾಗುತ್ತಿರುವ ಕುಡಿಯುವ ನೀರು ಗ್ರಾಮಸ್ಥರ ದಾಹ ನೀಗಿಸುವ ಬದಲು ಹಳ್ಳದ ಪಾಲಾಗುತ್ತಿರುವ ಘಟನೆ ಸಂಗೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಣೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ, ಕಬ್ಬೂರ ಮಾರ್ಗವಾಗಿ ಸಂಗೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿಡಗೂರ ಹಾಗೂ ಬಿದರಗಡ್ಡಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ, ಪೈಪ್ಲೈನ್ ಪದೇಪದೇ ಹಾನಿಗೊಳಗಾಗುತ್ತಿರುವುದರಿಂದ ನೀರು ಸೋರಿಕೆಯಾಗಿ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಿಮ್ಮಾಪುರ–ದಿಡಗೂರ ರಸ್ತೆಯ ಕೆರೆ ಸೇತುವೆ ಮೇಲೆಯೇ ಪೈಪ್ಲೈನ್ ಅಳವಡಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಾಹನಗಳ ಸಂಚಾರ ಹಾಗೂ ಕಿಡಿಗೇಡಿಗಳಿಂದ ಪೈಪ್ಗೆ ಹಾನಿಯಾಗುತ್ತಿದ್ದು, ಪೈಪ್ ಕಟ್ಟಾದಾಗಲೆಲ್ಲಾ ಕುಡಿಯುವ ನೀರು ರಸ್ತೆಯ ಬದಿ ಹಾಗೂ ಹಳ್ಳದತ್ತ ಹರಿದುಹೋಗುತ್ತಿದೆ. ಇದರಿಂದ ದೂರದ ಊರುಗಳಿಂದ ಕಷ್ಟಪಟ್ಟು ತರಲಾಗುತ್ತಿರುವ ನೀರು ಗ್ರಾಮಸ್ಥರ ಬಳಕೆಗೆ ಸಿಗದೆ ವ್ಯರ್ಥವಾಗುತ್ತಿದೆ ಎನ್ನಲಾಗಿದೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ, ನೀರಿನ ಸೋರಿಕೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪೈಪ್ಲೈನ್ನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ದಿಡಗೂರ ಹಾಗೂ ಬಿದರಗಡ್ಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
#byadaginews #haveri
#WaterProblem #watercrisis #VillagersProblem #publicissues #publicproblems #civicissues #GraminaSuddi #KannadaNews
#kannadanewslive #KarnatakaNews #latestkannadanews #breakingnewskannada #newslivestream #newslivestreaming #breakingnewslive #liveupdates

