ಕರ್ನಾಟಕ ರಾಜ್ಯದ ಧಾರಾವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ರತ್ನಾತ್ರಯ ಧರ್ಮ ನಗರಿ ಛಬ್ಬಿ ಗ್ರಾಮದ ಚಾತುರ್ಮಸ ಕಾರ್ಯಕ್ರಮದ ವಿವರ.* *ಸಮಸ್ತ ಆತ್ಮೀಯ ಸದ್ಧರ್ಮ ಬಂಧುಗಳಿಗೆ, ಸಹೋದರ-ಸಹೋದರಿಯರಿಗೆ ಹಾಗೂ ಸಮಸ್ತ ಶ್ರಾವಕ-ಶ್ರಾವಕಿಯರಿಗೆ ಈ ಮೂಲಕ ವಿನಮ್ರ ಧರ್ಮ ಸಂದೇಶ*. *ರತ್ನಾತ್ರಯ ಧರ್ಮ ನಗರಿ – ಛಬ್ಬಿ ಗ್ರಾಮದಲ್ಲಿ* *ನಾಳೆಯದಿನ ಭಾನುವಾರ, ದಿನಾಂಕ: 02-08-2026 ರಂದು ಪೂಜ್ಯ ಮುನಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಲಿವೆ.* 📌 *ಕಾರ್ಯಕ್ರಮಗಳ ವಿವರಗಳು:* 🕖 *ಬೆಳಿಗ್ಗೆ 7:00 ಗಂಟೆಗೆ – 108 ಯುವಕರಿಂದ ಶ್ರೀ ಜಿನೇಂದ್ರ ಭಗವಂತರ ಅಭಿಷೇಕ* . 🕢 *ಬೆಳಿಗ್ಗೆ 7:30 ಗಂಟೆಯಿಂದ – ಸರ್ವದೋಷ ಪ್ರಾಯಶ್ಚಿತ್ತ ಹಾಗೂ ವಿಧಿ-ವಿಧಾನಗಳು.* 🕐 *ಮಧ್ಯಾಹ್ನ 1:00 ಗಂಟೆಗೆ – ಚಾತುರ್ಮಾಸದ ಅಂಗವಾಗಿ,* *ಪರಮ ಪೂಜ್ಯ* *ಆಚಾರ್ಯ ರತ್ನ ಶ್ರೀ 108 ಬಾಹುಬಲಿ ಮುನಿ ಮಹಾರಾಜರ ಪರಮ ಶಿಷ್ಯರಾದ ಪರಮ ಪೂಜ್ಯ ಬಾಲಾಚಾರ್ಯ 108 ಡಾ. ಶ್ರೀ ಸಿದ್ದಸೇನ ಮುನಿ ಮಹಾರಾಜರವರಿಂದ ಚಾತುರ್ಮಾಸದ ಮಂಗಳ ಕಳಶ ಸ್ಥಾಪನೆ ಮಹಾಮಂಗಲವಾಗಿ ನೆರವೇರಲಿದೆ. 🙏🏻🪷* 🌸 *ಉದ್ಘಾಟಕರು* : *ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಸಾಹೇಬರು* ವಿಧಾನ ಪರಿಷತ್ ಸಭಾಧ್ಯಕ್ಷರು, ಕರ್ನಾಟಕ ಸರ್ಕಾರ 🌸 *ಮುಖ್ಯ ಅತಿಥಿಗಳು:* *ಶ್ರೀ ಅತುಲ್ ಜೈನ್, ದೆಹಲಿ* 🌸 *ಕಾರ್ಯಕ್ರಮದ ಅಧ್ಯಕ್ಷತೆ:* *ಮಾನ್ಯ ಶ್ರೀ ಎ. ಆರ್. ಪಾಟೀಲ ಸಾಹೇಬರು* ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ *ಆದ್ದರಿಂದ ಛಬ್ಬಿ ಗ್ರಾಮದ ಹಾಗೂ ಎಲ್ಲಾ ಗ್ರಾಮದ ಸಮಸ್ತ ಆತ್ಮೀಯ ಸದ್ಧರ್ಮ ಬಂಧುಗಳು, ಸಹೋದರ-ಸಹೋದರಿಯರು ಹಾಗೂ ಸಮಸ್ತ ಶ್ರಾವಕ-ಶ್ರಾವಕಿಯರು ಕುಟುಂಬ ಸಮೇತರಾಗಿ ಈ ಪುಣ್ಯಮಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯ ಮುನಿಗಳ ದಿವ್ಯ ಆಶೀರ್ವಾದ ಹಾಗೂ ಅನುಗ್ರಹವನ್ನು ಪಡೆದು ತಮ್ಮ ಜೀವನವನ್ನು ಸಾರ್ಥಕಗೊಳಿಸಬೇಕೆಂದು ವಿನಮ್ರವಾಗಿ ಕೋರುತ್ತೇವೆ.* 🍽️ *ಕಾರ್ಯಕ್ರಮದಲ್ಲಿ ಉಪಹಾರ ಹಾಗೂ ಮಹಾಪ್ರಸಾದ (ಊಟ) ವ್ಯವಸ್ಥೆ ಇರುತ್ತದೆ.* 🙏🏻 *ಆತ್ಮೀಯ ಸ್ವಾಗತ ಕೋರುವರು* : 🚩*🙏🏻🪷ಸಕಲ ಜೈನ ಸಮಾಜ, ಛಬ್ಬಿ* ತಾ: ಹುಬ್ಬಳ್ಳಿ | ಜಿ: ಧಾರವಾಡ –581207🪷🙏🏻🚩

