ಪೊಲೀಸ್ ಹವಾಲ್ದಾರ ಮಗನ ಸಾಧನೆಗೆ ರಾಜ್ಯದ ಜನರಿಂದ ಶ್ಲಾಘನೆ. ಹೌದು ಮಹಬುಬಸಾಬ ರಾಟಿಮನಿ ಕುಂದಗೋಳ ತಾಲೂಕ್ ದ್ಯಾವನೂರ್ ಗ್ರಾಮದಲ್ಲಿ ಜನಸಿ ಮಕ್ಕಳಿಗೆ ಒಳ್ಳೆಯ ವಿದ್ಯೆ ಅಭ್ಯಾಸ ಕೊಡಿಸಬೇಕೆಂದು ಆಶೆಯೊಂದಿಗೆ ಇವರ ಮಗನಾದ ಮಲ್ಲಿಕ ರಿಹಾನ್ 2026ನೇ ಇಸ್ವಿಯಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ 627 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ತಂದೆಯ ಕನಸು ನನಸು ಮಾಡಿದ್ದಾನೆಂದು ಮಹಬೂಬ್ ಸಾಬ್ ರಾಟಿಮನಿ ಸಂತೋಷ ವ್ಯಕ್ತಪಡಿಸಿದರು . ನೀಟ್ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಮಲಿಕ ರಿಹಾನ್ ರಾಟಿಮನಿ ಇವರ ಮಾವನಾದ ಅನ್ವರ್ ಸಾಬ್ ಮಾತನಾಡಿ. ನನ್ನ ಅಳಿಯ ಮಲ್ಲಿಕ್ ರಿಹಾನ್ ದ್ಯಾವನೂರು ಗ್ರಾಮ ಎಂಬ ಹಳ್ಳಿಯಲ್ಲಿ ಹುಟ್ಟಿ ಮುಂದೆ ಒಂದು ದಿನ ನಾನು ವೈದ್ಯನಾಗಿ ಜನರ ಸೇವೆ ಮಾಡಬೇಕೆಂಬ ಆಸೆಯೊಂದಿಗೆ ತಂದೆ ತಾಯಿ ಮಾರ್ಗದರ್ಶನದಲ್ಲಿ ನೀಟ್ ಪರೀಕ್ಷೆಯಲ್ಲಿ 627 ಅಂಕ ಪಡೆದಿದ್ದು ನನಗೆ ತುಂಬಾ ಸಂತೋಷವಾಯಿತು ಎಂದು ಹೇಳಿದರು. ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಧೀರ್ ಚಬ್ಬಿ ಮಾತನಾಡಿ. ಇಂಥ ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನ ಮಾಡಿ ಗೌರವಿಸುವುದು ನಮ್ಮ ಪುಣ್ಯ ಮುಂದಿನ ದಿನಮಾನದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಜನರ ಸೇವೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.. ಈ ಸಂದರ್ಭದಲ್ಲಿ ರಾಜು ಕಬ್ಬಣ್ಣವರ್ ಶೇಕಪ್ಪ ಮಾದರ ರಸುಲ್ ಸಾಬ್ ಮುಲ್ಲಾನವರ್ ಶಬ್ಬೀರ್ ಮುಲ್ಲಾ ನವರ್ ಸಮೀರ್ ಮುಲ್ಲಾ ನವರ್ ಉರ್ದು ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.

