ನಟ ದರ್ಶನ್ಗೆ ಮತ್ತೆ ಸಂಕಷ್ಟ? ರೇಣುಕಾಸ್ವಾಮಿ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್, ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ 59ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣದ ಸತ್ಯ ಹೇಳಲು ಸಿದ್ಧನಿದ್ದು ಕ್ಷಮೆ ನೀಡುವಂತೆ ಮನವಿ ಮಾಡಿದ್ದಾನೆ. ಜೊತೆಗೆ ಪ್ರತ್ಯೇಕ ಜೈಲು ಕೊಠಡಿಯಿಂದ ಕೋರ್ಟ್ಗೆ ಹಾಜರುಪಡಿಸುವಂತೆಯೂ ಕೋರಿದ್ದಾನೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಪ್ರದೋಷ್ ಹೇಳಿಕೆಯಿಂದ ದರ್ಶನ್ಗೆ ಸಂಕಷ್ಟ?

