ಹುಬ್ಬಳ್ಳಿ ಯ ಹೃದಯ ಭಾಗ ಚೆನ್ನಮ್ಮ ವೃತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಶಾಸಕ ಮಹೇಶ ತೆಂಗಿನಕಾಯಿ ಅವರು ಪರಿಶೀಲನೆ ಮಾಡಿದರು. ಫ್ಲೈ ಓವರ್ ಕಾಮಗಾರಿಂದ ಅವಳಿ ನಗರದ ವಾಹನ ಸವಾರರು ಸೇರಿ ಪಾದಚರಿಗಳು ಹೈರಾಣಾಗಿದ್ದು, ಕಾಮಗಾರಿ ಯಾವಾಗ ಮುಗಿಯುತ್ತೋ, ಕಾಮಗಾರಿಗೆ ಯಾವಾಗ ಮುಕ್ತಿ ಸಿಗುತ್ತದೆ ಎಂಬಾತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕ್ಷೇತ್ರದ ಶಾಸಕ ಇಂದು ಫ್ಲೈ ಓವರ್ ಕಾಮಗಾರಿ ವಿಳಂಬದ ಬಗ್ಗೆ ಖುದ್ದಾಗಿ ಫ್ಲೈ ಓವರ್ ಕಾಮಗಾರಿ ವೀಕ್ಷಣೆ ಮಾಡಿದ್ದು, ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರ ಸೇರಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೂ ಈ ವೇಳೆ ನಿಗದಿ ಸಮಯದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರನಿಗೆ ಖಡಕ್ ಎಚ್ಚರಿಕೆ ನೀಡಿದರು.

