ಹುಬ್ಬಳ್ಳಿ : ನಮ್ಮ ಸಂಸ್ಕೃತಿ ಬೃಹತ್ವಾದದ್ದು. ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಕಲೆ, ಸಾಹಿತ್ಯ ಹಾಗೂ ಪರಂಪರೆಯನ್ನು ಕರ್ನಾಟಕ ಹೊಂದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC) ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು. ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಇಂದು ಮಾತನಾಡಿದ ಅವರು, ಹಿಂದಿನಿಂದಲೂ ಅಪಾರ ಸಂಖ್ಯೆಯ ಸಾಹಿತಿಗಳು, ಕವಿಗಳು ಹಾಗೂ ಚಿಂತಕರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಸವಣ್ಣ, ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ಸೇರಿದಂತೆ ಅನೇಕ ಮಹನೀಯರ ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದರು. ಇಂದಿನ ಸಮಾಜದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಪುಸ್ತಕಗಳನ್ನು ಪಕ್ಕಕ್ಕೆ ಇಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸತ್ಯ. ಆದರೆ ಮೊಬೈಲ್ ಬಂದಿರುವುದರಿಂದ ಸಾಹಿತ್ಯ ಅಥವಾ ಕಲೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಓದಲು ಇಂದಿಗೂ ಸಾವಿರಾರು ಉತ್ತಮ ಪುಸ್ತಕಗಳು ಲಭ್ಯವಿವೆ. ಅವುಗಳನ್ನು ಓದುವ ಮನಸ್ಸುಗಳು ಬೇಕು ಎಂದು ನಂಜಯ್ಯನಮಠ ಹೇಳಿದರು. ಹಿಂದಿನ ಕಾಲದ ಸಾಹಿತ್ಯದ ಪ್ರತಿಯೊಂದು ಮಾತಿನಲ್ಲೂ ಅಪಾರವಾದ ಅರ್ಥ ಮತ್ತು ಸೊಗಡಿದೆ. ಅಂತಹ ಸಾಹಿತ್ಯವನ್ನು ಓದಿದಾಗ ಅಥವಾ ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ನಮ್ಮ ಮುಂದಿನ ಪೀಳಿಗೆಗೂ ಈ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು. #KSIIDC #ಸಂಸ್ಕೃತಿ #ಸಾಹಿತ್ಯ #kannada #trendingkannada #newsupdate #viralnews #kannadaupdates #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #todaynews #viral #hublidharwad #hubli

