ಇದು ಪಬ್ಲಕ್ 5 ವಿಶೇಷ ವರದಿ… ಶಿಕ್ಷಣ ರಂಗದಲ್ಲಿ ಹೊಸ ಕ್ರಾಂತಿಯ ಕನಸಿನೊಂದಿಗೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಆರೈಕೆ, ಶಿಸ್ತು ಮತ್ತು ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ರಮೇಶ್ ಬಾಪನಾ ಸ್ಪೆಷಲ್ ಆರ್ಯನ್ ಪಬ್ಲಿಕ್ ಸ್ಕೂಲ್ ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದೆ. ರಮೇಶ್ ಬಾಪನಾ — ಸಂಸ್ಥೆಯ ಅಧ್ಯಕ್ಷರು ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸಂಸ್ಥೆ ತನ್ನ ಶೈಕ್ಷಣಿಕ ಸೇವೆಯನ್ನು ವಿಸ್ತರಿಸಿಕೊಂಡಿದ್ದು, ಇದೀಗ ಒಟ್ಟು ಮೂರು ಶಾಖೆಗಳನ್ನು ಹೊಂದಿದೆ. ಮೂರು ಶಾಖೆಗಳ ಮೂಲಕ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದರ ಜೊತೆಗೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ವಾತಾವರಣ ನಿರ್ಮಿಸಲು ಸಂಸ್ಥೆ ಗಮನಹರಿಸಿದೆ. ಇದೀಗ ಸಂಸ್ಥೆ ತನ್ನ 11ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಶಾಲೆಯಲ್ಲಿ ಪ್ರಸ್ತುತ ಸುಮಾರು 940 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.… ಮಕ್ಕಳ ಶಿಕ್ಷಣದ ಜೊತೆಗೆ ಅವರ ದಿನನಿತ್ಯದ ಆರೈಕೆ ಹಾಗೂ ಅಗತ್ಯಗಳಿಗೂ ಶಾಲೆಯ ಆಡಳಿತ ಮಂಡಳಿ ವಿಶೇಷ ಗಮನ ನೀಡುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೈಕೆಯ ಕಾರ್ಯದಲ್ಲಿ ಒಟ್ಟು 16 ಬೋಧಕ ಸಿಬ್ಬಂದಿ, 35 ಆಯಾ ಹಾಗೂ ಹೆಲ್ಪರ್ ಸಿಬ್ಬಂದಿ ಮತ್ತು 15 ಡ್ರೈವರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಶಾಲೆಯ ಮತ್ತೊಂದು ವಿಶೇಷತೆ ಎಂದರೆ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರ ವ್ಯವಸ್ಥೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸುಮಾರು 1,100 ಮಂದಿಗೆ ಊಟ ಮತ್ತು ಉಪಾಹಾರ ಸಿದ್ಧಪಡಿಸಲಾಗುತ್ತದೆ. ಮಕ್ಕಳಿಗೆ ಚಪಾತಿ, ಪಲ್ಯ, ರೈಸ್, ಸಾಂಬಾರ್ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ನೀಡಲಾಗುತ್ತಿದ್ದು, ಆಹಾರದ ಗುಣಮಟ್ಟ ಮತ್ತು ಪೌಷ್ಟಿಕಾಂಶಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಬೆಳಗಿನ ಉಪಾಹಾರದಲ್ಲಿ ಬರೋಬ್ಬರಿ 11 ಬಗೆಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದ್ದು, ಪ್ರತಿದಿನವೂ ಒಂದೇ ರೀತಿಯ ಮೆನು ಇರದಂತೆ ವಿಭಿನ್ನ ರೀತಿಯ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಅವರ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆಯೂ ಕಾಳಜಿ ವಹಿಸುವ ಮೂಲಕ ಶಾಲೆಯು ವಿಶೇಷ ಮಾದರಿಯನ್ನು ರೂಪಿಸುತ್ತಿದೆ. ಶಿಕ್ಷಣ, ಶಿಸ್ತು, ಸಂಸ್ಕಾರ, ಮಕ್ಕಳ ಆರೈಕೆ ಮತ್ತು ಪೌಷ್ಟಿಕ ಆಹಾರ — ಈ ಎಲ್ಲ ಅಂಶಗಳಿಗೆ ಒತ್ತು ನೀಡುತ್ತಾ ಸಂಸ್ಥೆ ತನ್ನ ಶೈಕ್ಷಣಿಕ ಪಯಣವನ್ನು ಮುಂದುವರಿಸುತ್ತಿದೆ. ಒಟ್ಟಿನಲ್ಲಿ, ರಮೇಶ್ ಬಾಪನಾ ಅವರ ನೇತೃತ್ವದಲ್ಲಿ ಮೂರು ಶಾಖೆಗಳ ಮೂಲಕ ಶಿಕ್ಷಣ ಸೇವೆಯನ್ನು ವಿಸ್ತರಿಸಿಕೊಂಡಿರುವ ಸ್ಪೆಷಲ್ ಆರ್ಯನ್ ಪಬ್ಲಿಕ್ ಸ್ಕೂಲ್, ಇದೀಗ 11ನೇ ವರ್ಷದ ಸಂಭ್ರಮದಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ವಾತಾವರಣ ನಿರ್ಮಿಸುವ ಗುರಿಯೊಂದಿಗೆ ಸಂಸ್ಥೆ ಮುಂದಿನ ದಿನಗಳಲ್ಲೂ ತನ್ನ ಶೈಕ್ಷಣಿಕ ಸೇವೆಯನ್ನು ಮತ್ತಷ್ಟು ವಿಸ್ತರಿಸುವತ್ತ ಹೆಜ್ಜೆ ಹಾಕುತ್ತಿದೆ.#Aryan_public_school #hublischool #education #educationsystem #rameshbafna #hubli #hublidharwad

