ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ರೈತನ ಹೊಲಕ್ಕೆ ನುಗ್ಗಿದ ಕರಡಿಗಳು ರೈತನ ಮೇಲೆ ಏಕಾಏಕಿ ದಾಳಿ ನಡೆಸಿದ್ದು
ಈ ದಾಳಿಯಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಇದು ಎರಡನೇ ಘಟನೆ ಆಗಿದ್ದು ರೈತರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಹಾಗೆ ಇಲ್ಲಿಯ ಶಾಸಕರು ಹಾಗೆ ಕಾರ್ಮಿಕ ಸಚಿವ ಆಗಿರುವಂತ ಸಂತೋಷ ಲಾಡ್ ರವರು ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಸಾ0ತ್ವಾನ ಹೇಳುವುದು ಬಿಟ್ಟರೆ ಹಿಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಗ್ರಾಮದ ಶಂಕರಪ್ಪ ಆಗಸರ್ ಎಂಬ ರೈತರ ಕಬ್ಬಿನ ಹೊಲಕ್ಕೆ ಕರಡಿಗಳು ನುಗ್ಗಿ ದಾಳಿ ಮಾಡಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಕಬ್ಬಿನ ಹೊಲದಲ್ಲಿ ಕರಡಿಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತರು ಹೊಲಗಳಿಗೆ ತೆರಳಲು ಆತಂಕ ಪಡುವಂತಾಗಿದೆ.
ಕರಡಿಗಳ ಹಾವಳಿಯಿಂದ ರೈತರ ಕೃಷಿ ಚಟುವಟಿಕೆಗಳಿಗೂ ಭೀತಿ ಎದುರಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕರಡಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಜೊತೆಗೆ ರೈತರು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
#kalaghatagi #bearattacks #karnatakanews #KIMS #kannadanews #dharwad #breakingnews #karnataka #wildanimalattack #kannadanewslive #Public5NewsKannada #bearattack #forestdepartment #humananimalconflict #wildlifeattack #karnatakaforest #safetyalert

