ರಾಣೇಬೆನ್ನೂರು
ಅಂಗನವಾಡಿ ಕೇಂದ್ರಗಳಿಗೆ ತಲುಪಬೇಕಾದ ತೊಗರಿಬೇಳೆ ಸರ್ಕಾರಿ ರಜಾ ದಿನವೇ ಅಕ್ರಮ ಸಾಗಾಟ ಆರೋಪ!
*ಆಮ್ ಆದ್ಮಿಪಕ್ಷದ ಜಿಲ್ಲಾ ಅಧ್ಯಕ್ಷ M N ನಾಯಕರವರಿಂದ ಭರ್ಜರಿ ಬೇಟೆ*!
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಗೋದಾಮಿನಿಂದ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಬೇಕಾದ ಸರ್ಕಾರಿ ತೊಗರಿಬೇಳೆ ರಜಾ ದಿನದಂದೇ ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಸರಬರಾಜು ಗೋದಾಮಿನಲ್ಲಿ ಈ ಅಕ್ರಮ ನಡೆದಿದೆ ಎನ್ನಲಾಗಿದ್ದು, ಗೋದಾಮಿನ ಮ್ಯಾನೇಜರ್ ಈಶ್ವರಗೌಡ ಪಾಟೀಲ್ ಅವರ ಸಮ್ಮುಖದಲ್ಲೇ ಅಕ್ರಮ ಸಾಗಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ರಜಾ ದಿನದಂದೇ ತೊಗರಿಬೇಳೆ ಸಾಗಾಟಕ್ಕೆ ಅವಕಾಶ ನೀಡಿದವರು ಯಾರು? ಅಂಗನವಾಡಿ ಮಕ್ಕಳಿಗೆ ತಲುಪಬೇಕಾದ ಆಹಾರ ಪದಾರ್ಥಗಳ ಸಾಗಾಟದಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ.? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ಸರ್ಕಾರಿ ಆಹಾರ ಪದಾರ್ಥಗಳ ಸಾಗಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
#ranebennurnews #haveridistrict #haverinews #kannadanews #breakingnews #governmentholiday #ranebennurnews #karnatakanews #AAPRanebennur #aamaadmipartykarnataka #aapnews #PoliticalNewsKannada #karnatakapolitics #aapleader #togaribele #Ranebennuranganwadi #anganavadi #scam #GovernmentDal #holidaytransport #apmcscam #publicissue #governmentprocurement #Public5NewsKannada #Public5NewsLive #kannadanewschannel #breakingkannadanews #karnatakanewsupdates #topstorykannada #journalismforpeople

